Popular Posts

ನಟ ಅಂಬರೀಶ್ ಹೆಸರು ಬಿಡಿಎ ಬಡಾವಣೆಗೆ ನಾಮಕರಣ!

Rebel Star Ambarish


ಬೆಂಗಳೂರಿನ ವಸಂತಪುರ ವಾರ್ಡ್‌ನಬಿಕಾಸಿಪುರ ಗ್ರಾಮದಲ್ಲಿ ಬೆಂಗಳೂರುಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವಬಡಾವಣೆಗೆ ರೆಬೆಲ್ ಸ್ಟಾರ್ ಅಂಬರೀಶ್ಬಡಾವಣೆ ಎಂದು ಬಿಬಿಎಂಪಿಸರ್ವಾನುಮತದಿಂದ ನಾಮಕರಣ ಮಾಡಿದೆ.

ಬಿಕಾಸಿಪುರ ಗ್ರಾಮದಲ್ಲಿನ ಬಿಡಿಎ ಬಡಾವಣೆಗೆಯಾವುದೇ ಹೆಸರು ಇಲ್ಲದಿರುವುದರಿಂದ ರೆಬೆಲ್ಸ್ಟಾರ್ ಅಂಬರೀಶ್ ಬಡಾವಣೆ ಎಂದುನಾಮಕರಣ ಮಾಡಲಾಗಿದೆ ಎಂದು ಪಾಲಿಕೆಸದಸ್ಯೆ ಶೋಭಾಗೌಡ  ತಿಳಿಸಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರ ಗೌರವಾರ್ಥಅವರ ಹೆಸರನ್ನು ನಾಮಕರಣ ಮಾಡಲುಪಾಲಿಕೆ ಸಭೆಯಲ್ಲಿ ಸರ್ವಾನುಮತದತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರುತಿಳಿಸಿದ್ದಾರೆ.

ಕಳೆದ ವರ್ಷದ ಡಿ. 27 ರಂದು ನಡೆದ ಮಾಸಿಕಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎಮ್. ಶಿವರಾಜ್ ಅವರು ನಿರ್ಣಯವನ್ನುಮಂಡಿಸಿದ್ದರು. ಇದಕ್ಕೆ ಕಾಂಗ್ರೆಸ್‌ನ ಆರ್.ಎಸ್ಸತ್ಯನಾರಾಯಣ ಅವರು ನಿರ್ಣಯವನ್ನುಅನುಮೋದಿಸಿದ್ದರು. ನಂತರ ನಿರ್ಣಯವನ್ನುಮತಕ್ಕೆ ಹಾಕಿ ಸರ್ವಾನುಮತದಿಂದಅಂಗೀಕರಿಸಲಾಯಿತು ಎಂದು ಅವರುತಿಳಿಸಿದ್ದಾರೆ.