Popular Posts

ತುಟಿ ಬಿರುಕು ಬಿಟ್ಟಿದೆಯೇ? ಹಾಗಾದ್ರೆ ಇದನ್ನು ಹಚ್ಚಿ ನಿಮ್ಮ ತುಟಿಯನ್ನು ಕೋಮಲವಾಗಿಸಿಕೊಳ್ಳಿ


Make the lip tender


ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಾಗಿ ತುಟಿ ಕೋಮಲತೆಯನ್ನು ಕಳೆದುಕೊಂಡು ಒಡೆಯುತ್ತದೆ. ಇದರಿಂದ ತುಟಿ ಉರಿಯುವುದು ಮಾತ್ರವಲ್ಲ ಕೆಲವೊಮ್ಮೆ ರಕ್ತ ಕೂಡ ಬರುತ್ತದೆ. ಇದನ್ನು ಮನೆಮದ್ದಿನಿಂದ ಬಹಳ  ಬೇಗ ನಿವಾರಿಸಿಕೊಳ್ಳಬಹುದು.

ಗುಲಾಬಿ ಹೂವಿನ ದಳದ ಪೇಸ್ಟ್ 1 ಟೀ ಚಮಚ, ಹಾಲಿನ ಕೆನೆ 1ಟೀ ಚಮಚ, ಜೇನುತುಪ್ಪ 1 ಟೀ ಚಮಚ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿಕೊಳ್ಳಿ. ಅರ್ಧಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದನ್ನು ದಿನದಲ್ಲಿ 8 ಬಾರಿ ಮಾಡಬೇಕು. ಹೀಗೆ ಮಾಡಿದರೆ 2 ದಿನದಲ್ಲಿ ಒಡೆದ ತುಟಿ ಸರಿಯಾಗುತ್ತದೆ. ಹಾಗೇ ತುಟಿಗೆ ಕಲರ್ ಕೂಡ ಬರುತ್ತದೆ.


ಶುದ್ಧ ಹಸುವಿನ ತುಪ್ಪ  1 ಟೀ ಚಮಚ, ಹಾಲಿನ ಕೆನೆ 1ಟೀ ಚಮಚ, ಜೇನುತುಪ್ಪ 1 ಟೀ ಚಮಚ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿಕೊಂಡು 5-10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಅರ್ಧಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದನ್ನು ಕೂಡ ದಿನದಲ್ಲಿ 8 ಬಾರಿ ಮಾಡಬೇಕು. ಹೀಗೆ ಮಾಡಿದರೆ 2 ದಿನದಲ್ಲಿ ಒಡೆದ ತುಟಿ ಸರಿಯಾಗುತ್ತದೆ.